Friday, February 24, 2006

namma kathe (an ode to friendship)



Inspired by an idea given by Archana, I penned this small Kannada poem to showcase 10 years of an amazing roller-coaster of a journey of friendship I have had with Chikki and Sidd. We met for the first time in 1996 and have since continued to grow closer every passing day and with each passing love affair. My control on written Kannada is not the best so if people notice any mistakes grammatically, then please let me know.

ಇದು ನಮ್ಮ ಕಥೆ,
ಇದು ನಮ್ಮ ಕನಸುಗಳ ಕಥೆ,
ನಮ್ಮ ಜೀವನದಲ್ಲಿ ಚಿರಕಾಲ ಉಳಿದ ಕಥೆ,
ನಮ್ಮ ಮನಸ್ಸುಗಳನ್ನು ಒಂದು ಮಾಡಿದ ಕಥೆ.

ಹಲವಾರು ಮುಖಗಳನ್ನು ಮಾತನಾಡಿಸಿ,
ಒಂದು ಅಸ್ತಿತ್ವವನ್ನು ಹುಡುಕಾಡುತ್ತ,
ನೂರಾರು ದಿನಗಳು ಒಂಟಿಯಾಗಿದ್ದು,
ಕೊನೆಗೆ ಸಂಧಿಸಿದ ನಮ್ಮ ಕಣ್ಣುಗಳ ಕಥೆ.

ಜೀವನದ ಮುಖ್ಯ ಪಯಣದ ದಿನಗಳು ಅಲ್ಲಿ,
ನಕ್ಕು ನಲಿದು ಕೊನೆ ಕಾಣದ ಮದ್ದಿನಲ್ಲಿ,
ಹಾಡುಗಳ ರಂಗಿನಲ್ಲಿ, ಮಾತುಗಳ ಗುಂಗಿನಲ್ಲಿ,
ಪ್ರೇಮವನ್ನು ಹುಡುಕಾಡುವ ಆಟಗಾರರಾಗಿ,
ಗೆದ್ದು ಸೋತು ಬದುಕಿದ ನಮ್ಮ ಕಥೆ.

ಹುಡುಗರಾಗಿ ಸೇರಿದ ನಾವು ಬೆಳೆಯುವ ಕಾಲವದು,
ಓದು ಬರಹದ ನೆಪದಲ್ಲಿ ಕುಣಿದಾಡುವ ಶಾಲೆಯದು,
ಪ್ರತಿದಿನವೊಂದು ನೂತನ ವಿಷಯದಲ್ಲಿ ಮುಳುಗುವ ಜಾಲವದು,
ಆ ಜಾಲದಲ್ಲಿ ಏದ್ದು ಬಿದ್ದು ಬದುಕಿದ ನಮ್ಮ ಕಥೆ.

ಸ್ನೇಹದ ಹೆಸರಿನಲ್ಲಿ ಒಂದಾದೆವು ನಾವು ಮೂರು ಜನ,
ಪ್ರೇಮದ ಕೆಸರಿನಲ್ಲಿ ಜಾರಿದೆವು ಪ್ರತಿ ದಿನ,
ಅರಿತು ಕಲಿತು ಕುಳಿತು ಬೆರೆತು,
ಇಂದು ಕೂಡ ಒಂದಾಗಿರುವುದು ನಮ್ಮ ಮನ.

ಹತ್ತು ವರುಷಗಳ ಈ ಅಮೋಘ ಸಂಬಂಧ,
ಮೇಲೆ ಕೆಳಗೆ ಹೋಗಿ ಬಂದ ನಮ್ಮ ಅನುಬಂಧ,
ಯಾರು ಕಾಣದ ಜೀವನ ಕಂಡೆವು ನಾವೆಲ್ಲ,
ದೇಹ ಮೂರಾದರು ಪ್ರಾಣ ಒಂದಾದ
ನಮ್ಮ ಕಥೆ.

ಇದು ನಮ್ಮ ಕಥೆ,
ನಮ್ಮ ಕನಸುಗಳ ಕಥೆ.


ShaKri

2 reflections:

wookie said...

hey try BARAHA, I think that's better than whatever software you are using currently.

ShaK said...

This was written in BARAHA software itself. I have been using BARAHA for many years now. However, you will need an XP machine to view the Unicode font that was used in this work. This was done so that users without Kannada fonts can also read it.

 
;