Tuesday, March 04, 2008

ಬೆಡಗಿಯ ನಿರೀಕ್ಷೆ

Best viewed in Microsoft Internet Explorer
ಬೆಡಗಿಯ ನಿರೀಕ್ಷೆ

ಇದು ಅವನ ತಪ್ಪಲ್ಲ. ಚಿಕ್ಕ ವಯಸ್ಸಿನಿಂದ ಪ್ರೇಮಿಗಳ ಕಥೆಗಳನ್ನು ಕೇಳಿದ ಅವನಿಗೆ, ನಿಜ ಜೀವನದ ಬಗ್ಗೆ ಇದ್ದ ಕಲ್ಪನೆಗಳೆಲ್ಲ ಸ್ವಲ್ಪ ಮಟ್ಟಿಗೆ ಸುಳ್ಳು ಅಂತ ಗೊತ್ತಾಗ್ಲಿಲ್ಲ. ಕನ್ನಡ ಚಲನಚಿತ್ರಗಳಲ್ಲಿ, ಬಾಲಿವುಡ್, ಹಾಲಿವುಡ್ ಸಾಗರದಲ್ಲಿ, ಅವಳನ್ನೆ ಹುಡುಕುತ್ತ ಹೊರಟ ಅವನಿಗೆ, ಸತ್ಯದ ಅರಿವಾದಾಗ ಇನ್ನೇನು ಮೂವತ್ತು ತುಂಬೋ ವಯಸ್ಸು. ಏಲ್ಲಿ ಸಿಗುವಳೊ ನನ್ನ ಕನಸಿನ ಬೆಡಗಿಯೆಂದು ಮಗುವಂತೆ ಹಂಬಲಿಸುತ್ತಿದ್ದ ಅವನ ಮನಸ್ಸಿಗೆ ರಾಮಬಾಣದಂತೆ ನಾಟಿತು - ಒಂದು ಕಹಿ ಸತ್ಯ.

ಅವತ್ತು ಆ ನಗರದ ಛಳಿಯ ವಾತಾವರಣದಲ್ಲಿ ನೆಮ್ಮದಿಯಿಂದ ತನ್ನ ಸೋಲಿನ ಜೊತೆ ಕುಳಿತಿದ್ದ. ಆಚೆ ನಿಸ್ಶಬ್ಧವಾಗಿ ಬೀಳುತ್ತಿದ್ದ ಹಿಮವನ್ನು ನೋಡುತ್ತ, ತನ್ನ ಶಾಕಾಹಾರಿ ಪಿಜ಼್ಜ಼ಾವನ್ನು ಸೇವಿಸುತ್ತಿದ್ದ. ಅವನ ಮನಸಿನಲ್ಲಿ ಅದೇನೋ ಒಂದು ತರಹ ಚಿಂತೆ...ಯೋಚನೆ.

"ಛೆ! ನನ್ನ ಜೀವನದಲ್ಲಿ ಎಷ್ಟೊಂದು ಅಸಾಧ್ಯಗಳನ್ನು ಸಾಧಿಸಿದ ನನಗೆ - ಒಂದು ಹುಡುಗಿ ಗತಿ ಇಲ್ಲದೆ ಹೊಯಿತಲ್ಲ"....ಎಂದು ಮೂಕ ಕೊರಗು. ಏಲ್ಲೊ ರಸ್ತೆಯಲ್ಲಿ ಕೈನಲ್ಲಿ ಕೈ ಹಿಡಿದುಕೊಂಡು ಹೋಗುತ್ತಿದ್ದ ಜೊಡಿಯನ್ನು ನೋಡಿ - "ಮೂರ್ಖರು! ಮಾಡಕ್ಕೆ ಬೇರೆ ಕೆಲಸ ಇಲ್ಲ ಇವರಿಗೆಲ್ಲ! ಸುಮ್ಸುಮ್ನೆ ನಮ್ಮ ಕಣ್ಣ ಮುಂದೆ ಬಂದು ತಲೆ ತಿಂತಾರೆ....ಖರ್ಮ!" ಎಂದು ತನ್ನ ಮನಸಿನಲ್ಲೆ ಮಾತಾಡಿಕೊಂಡ.

ಅವನ ಈ ಬೇಸರಕ್ಕೆ ಹಲವಾರು ಕಾರಣಗಳಿವೆ ಅನ್ನಿ. ಒಂದು - ಪರದೇಸಿ ಹೆಣ್ಣನ್ನು ತನ್ನ ಜೀವನ ಸಂಗಾತಿಯಾಗಿ ತರಲು ತುಂಟ ಆಸೆಯಿದ್ದರು, ಕಾರ್ಯರೂಪಕ್ಕೆ ತರಲು ಧೈರ್ಯಸಾಲದ ಹೃದಯ. ಹೋಗಲಿ ಒಬ್ಬ ದೇಸಿ ಹೆಣ್ಣನ್ನೆ ಲವ್ ಮಾಡಿ - ಯಾವುದೇ ಜಾತಿಯಿರಲಿ - ತನ್ನ ತಂದೆ ತಾಯಿಯನ್ನು ಓಲಿಸಿಕೋಳ್ಳುವ ಸಾಧ್ಯತೆ ಇರದ ಬದುಕು. ಇದರ ಮೇಲೆ ಪದೆ ಪದೆ ಈ ಅಂತರ್ಜಾಲದಲ್ಲಿ ಸಿಗದೆ ಆಟಾಡಿಸುವ ಮುಖವಿಲ್ಲದ ಹುಡುಗಿಯರು. ಅಯ್ಯೋ ದೇವರೆ! ಯಾಕೆ ಕೆಳುತ್ತೀರ ಇವನ ಪಾಡು.

ಅದೆಲ್ಲ ಹೋಗಲಿ - "ಭಾರತಕ್ಕೆ ಹೋಗಿ, ಜಾತಕ ನೋಡಿ ಒಂದು ಸುಂದರವಾದ ಹುಡುಗಿಯನ್ನು ಆರಿಸಿಕೊಂಡು ಜೀವನ ಸೆಟಲ್ ಮಾಡಿಕೊಳ್ಳೋಲೊ ಪೆದ್ದ!" - ಅಂತ ಹೇಳಿದ ಅವನ ಮನಸು ಕೂಡ ಈಗ ಶಾಂತ. ಕಾರಣ? ಎಲ್ಲ ಕಡೆ ತಲೆ ಮೇಲೆ ನಡೆದುಕೊಂಡು ಜಾಲಾಡಿಸಿ, ಜಾಹಿರಾತು ಕೊಟ್ಟು, ಅಂತರ್ಜಾಲದಲ್ಲಿ ತನ್ನ ಚೆಲುವಾದ ಪ್ರೊಫ಼ೈಲನ್ನು ಬಿಟ್ಟು, ಸಾರ್ - ಹೋಗಲಿ ವಧುದಕ್ಷಿಣೆ ಕೂಡ ಕೊಡೋಣ ಬಿಡಿ - ಎಂದು ಹೆಣ್ಣಿನವರಿಗೆ ತಿಳಿಸಿ.....ಎಲ್ಲ ಮಾಡಿಯು "ವಿದೇಶಕ್ಕೆ ಬರಲ್ಲ ಹೋಗಯ್ಯ! ಏನೊ ಮಹ ಬಂದುಬಿಟ್ಟ ಸುರಸುಂದರಾಂಗ!" ಎಂದು ಕೇರ್‍ ಮಾಡದೆ ಇರ್‍ಒ ದೇಸಿ ಫ಼ಿಗರ್ಸ್. ಇವನೇನೊ ಮಹ ಭಾರತಕ್ಕೆ ಹೋಗಿ ಅದೇನೋ ಕಿಸಿದುಬಿಡುವೆ ಏಂದು ಹಾಕಿದ ಯೊಜನೆಗಳೆಲ್ಲ ವ್ಯರ್‍ಥ. ಬಂದ ಹತ್ತು-ಹದಿನಾರು ಜಾತಕಗಳಲ್ಲಿ, ಸೆರಿಯಾಗಿ ಹೊಂದುಕೊಂಡಿದ್ದೆ ಮೂರ್‍ಓ ನಲಕ್ಕೋ. ಅದರ ಮೇಲೆ ಆ ಹೊಂದಾಣಿಕೆ ಇರೋ ಜಾತಕದ ಹುಡುಗಿಯರ ತಂದೆಗಿರೋ ಉತ್ಸಾಹದ ಕಾಲುಭಾಗವು ಆ ಹುಡುಗಿಗೆ ಇಲ್ಲ.

"ಅಯ್ಯ....ಈ ಮುಖಕ್ಕೆ ನನ್ನಂತಹ ಚೆಲುವೆ! ನೋ ವೇ ಡ್ಯಾಡ್!', ಎಂದು ತನ್ನ ಕೋಣೆಗೆ ಹೋದ ಮಗಳ ಪರವಾಗಿ ಏನನ್ನು ಹೇಳಲಾಗದ ತಂದೆ....ಮೌನ. ಇದೆಲ್ಲರ ಮಧ್ಯೆ ಇವನಿಗೆ ೨೦೦ ರುಪಾಯಿಗಳ ತಿರುಮಲ ಚೌರ. ಪ್ರತಿ ಸಲ ಜಾತಕ ಹೊಂದಾಣಿಕೆ ಮಾಡಿಸುವ ಖರ್ಚು ೧೦೦ ರುಪಾಯಿ. ಅಲ್ಲಿ ಹೋಗಿ ಬರುವ ಆಟೋ ದುಡ್ಡು ಇನ್ನೊಂದು ೧೦೦ ರುಪಾಯಿ.

ಎರಡು ವಾರದ "ಧಿಡೀರ್" ಭಾರತ ಕರ್ಯಕ್ರಮಕ್ಕೆ ದುಖ್ಖದ ಮಂಗಳ ಹಾಡಿಕೊಂಡು, ಬಂದ ದಾರಿಗೆ ಸುಂಕವಿಲ್ಲವೆಂದು ಮರಳಿ ಬಂದ, ನಮ್ಮ ರಾಜಕುಮಾರ, ತನ್ನ ಛಳಿಯ ನಗರಿಗೆ. ಇಲ್ಲಿ ಬಂದರೊ ಕೂಡ ಆನ್ಲೈನ್ ಜಗತ್ತಿನಿಂದ ಅದೇನೊ ಮಹ ಸುಖ ಸುದ್ಧಿ ಬರುತ್ತೆಯೆಂದು ಕಾಯುತ್ತಿರುವನು.....ಇಂದಿಗು. ಸಧ್ಯಕ್ಕೆ ಬರೀ ನಿರಾಶೆಯ "ರಿಜೆಕ್ಷನ್ಸ್" ಬಂದಿವೆ ಹೊರತು ... ಸೆರಿ ಕಣಪ್ಪ, ನೋಡಕ್ಕೆ ಸುಮಾರಾಗಿದ್ದರು ಒಂದು ಚಾಂಸ್ ತೊಗೊತೀನಿ ಬಾ ... ಏಂದು ಹೇಳದೆ ಇರುವ ಹುಡುಗಿಯರ ಹಿಂಡು.

ಇದೆಲ್ಲ ಆದರೂ ಒಂದು ಮಾತ್ರ ಸತ್ಯ - ಇವನ ಬೇಸರದ ಮನಸ್ಸಿನ ಒಂದು ಪುಟ್ಟ ಕೋಣೆಯಲ್ಲಿ ಭರವಸೆಯ ದೀಪ ಇನ್ನು ಊರಿಯುವುದು. ಆ ದೇವರು ಈ ಕೆಲಸದಲ್ಲಿ ನನಗೆ ಸಿಕ್ಕಾಪಟ್ಟೆ ಎಡವಟ್ಟು ಮಾಡಿ ಹಾಕಿದ ಕಾರಣ - ಒಂದು ಸೂಪರ್ ಬೆಡಗಿ ನನಗಾಗಿ ಕಾಯುತ್ತಿದ್ದಾಳೆ....ಸೆರಿಯಾದ ಸಮಯ ಬರಬೇಕು ಅಷ್ಟೆ.... ಎಂದು ನಂಬಿ ಕೂತಿರುವ ಇವನ ಆಶಾವಾದಿ ಹೃದಯ.

ಇವನ ಈ ಆಶವಾದದ ಬಿಂಬ ಸತ್ಯವಾಗಿ, ಇವನ ಬಾಳಲ್ಲಿ ನಿಜಕ್ಕು ಒಂದು ತುಂಟ ಚೆಲುವೆ ಕಾಲಿಟ್ಟು ಈ ಪುಣ್ಯಾತ್ಮನನ್ನು ಬೇರೆ ಜೋಡಿಗಳನ್ನು ನೋಡಿ ಕೋಪಿಸಿಕೊಳ್ಳದಂತೆ ಕಾಪಾಡುವಳೆಂದು...ಬನ್ನಿ, ನಾವೆಲ್ಲ ಹಾರೈಸೋಣ.

ಶ. ಕೃ

3 reflections:

Anonymous said...

SK, Nimma kathe chennagidhe. I am sure there is a special girl waiting for your character who would make his life colourful

ಸ್ವರ said...

ಬೊಂಬಾಟ್ ಶಶಿ.. ಮಸ್ತ್ ಬರೆದಿದ್ಯ :)

ಹು, ನಾನು ಕೇಳ್ಕೊತಿನಿ - ಒಳ್ಳೆಯದಾಗಲಿ ಅಂತ :))

- ನೀತು :)

shakri said...

@Anonymous

Thank you, friend. I am glad you liked it!:)

@Neetu

Thank you! Your good wishes are always appreciated. :)

SK

 
;